ದೇವಸ್ಥಾನದ ವಿಶೇಷತೆ
ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಚಂದಗುಳಿ- ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದಗುಳಿ
ಗ್ರಾಮದಲ್ಲಿದೆ.ಈ ದೇವಸ್ಥಾನವನ್ನು ಸೋದೆ ಅರಸರ ಕಾಲದಲ್ಲಿ ಪತಿಷ್ಠಾಪಿಸಲಾಯಿತೆಂಬ ಪ್ರತೀತಿ ಇದೆ. ಶ್ರೀ ಸ್ವರ್ಣವಲ್ಲೀ ಮಠದ
ಯಲ್ಲಾಪುರ ಸೀಮಾ ಭಾಗದಲ್ಲಿ ಬರುವ ಈ ಶ್ರೀ ಸಿದ್ಧಿವಿನಾಯಕ ದೇವಸ್ಥಾನವು ಶ್ರೀ ಮಠದ ಅಧೀನದಲ್ಲಿದ್ದು ಶ್ರೀ ಮಠದ ಶ್ರೀಗಳವರ
ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯನೆರವೇರುತ್ತದೆ.
ಶ್ರೀ ಸಿದ್ಧಿವಿನಾಯಕ ದೇವರ ಮೂರ್ತಿ ಪ್ರತಿಷ್ಠೆಯು ಶ್ರೀ ಶಕೆ 1901 ನೇ ಸಿದ್ಧಾರ್ಥಿಸಂ|| ವೈಶಾಖ ಶುಕ್ಲ ಸಪ್ತಮಿ ಗುರವಾರ
ದಿ;3-5-1979 ರಂದು ಶ್ರೀ ಶ್ರೀ ಶ್ರೀ ಸರ್ವಜೆÐೀಂದ್ರ ಸರಸ್ವತೀ ಮಹಾಸ್ವಾಮಿಜಿಗಳ ಅಮೃತ ಹಸ್ತದಿಂದ ನೆರವೇರಿಸಿದರು.ಶ್ರೀ
ಸಿದ್ಧಿವಿನಾಯಕ ದೇವರ ಆರಾಧಕರಿಗೆ ತಮ್ಮ ಕಷ್ಟಕಾಲದಲ್ಲಿ ಘಂಟೆಯನ್ನು ಹರಕೆ ಮಾಡಿಕೊಂಡು, ಕಾರ್ಯ ಪೂರ್ಣಗೊಂಡಮೇಲೆ ಹರಕೆ
ತೀರಿಸುವಪರಿ ರೂಢಿಯಲ್ಲಿದೆ. ಅನಾದಿ ಕಾಲದಿಂದಲೂ ಭಕ್ತಾದಿಗಳು ಘಂಟೆ ಅರ್ಪಿಸಿ,ಹೋಮ ಹವನ ಮಾಡಿ ತಮ್ಮ ತಮ್ಮ ಹರಕೆ
ಪೂರೈಸಿಕೊಳ್ಳುವ ವಾಡಿಕೆ ಇದೆ .......
ಶ್ರೀ ದೇವರ ನೂತನ ಕಟ್ಟಡದ ಶಿಲಾನ್ಯಾಸವನ್ನು ಶ್ರೀ ಶಕೆ 1913 ನೇ ಪ್ರಜಾಪತಿ ಸಂವತ್ಸರದ ಮಾಘ ಶುಕ್ಲ ನವಮಿ ಗುರುವಾರ
ದಿ.13-2-1992 ರಂದು ಶ್ರೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಿಸಿದರು.
ಅಂದಿನಿಂದ ಆಡಳಿತ ಮಂಡಳಿಯ ಜೊತೆಗೆ, ಸ್ಥಳೀಯರ, ಭಕ್ತರ ಸೇವಾಕಾರ್ಯದೊಂದಿಗೆ ಕೆಲಸ ಪ್ರಾರಂಭಗೊಂಡು ಮೂರುವರ್ಷದಲ್ಲಿ
ಸುಂದರ
ದೇವಸ್ಥಾನ ನಿರ್ಮಾಣಗೊಂಡಿತು. ಶ್ರೀ ದೇವಸ್ಥಾನದ ಶಿಖರ ಪ್ರತಿಷ್ಠೆ ಹಾಗೂ ಸಂಪ್ರೋಕ್ಷಣಿಯನ್ನು ಶ್ರೀ ಶಕೆ 1916 ನೇ
ಬಾವ
ಸಂವತ್ಸರ ಮಾಘ ಶುಕ್ಲ ತ್ರಯೋದಶಿ ಸೋಮವಾರ ದಿ|| 13-2-1995 ರಂದು ಶ್ರೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ
ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಿಸಿದರು.
ಶ್ರೀ ಸಿದ್ಧಿವಿನಾಯಕ ದೇವರ ಕೃಪೆಗೆ ಪಾತ್ರರಾಗಿ ತಮ್ಮ ಮನದ ಸಂಕಲ್ಪ ನೆರವೇರಿದ ಕಾರಣ ಭಕ್ತಾದಿಗಳೇ “ಘಂಟೆ ಗಣಪತಿ”
ಎಂಬ
ಹೆಸರನ್ನು ಜಗದ್ಜ್ಜಾಹಿರ ಗೊಳಿಸಿ,ಪ್ರತಿದಿನವು ಸಾವಿರಾರು ಸಂಖ್ಯೆಯಲ್ಲಿ ಬಂದು ಶ್ರೀ ದೇವರಲ್ಲಿ ಬೇಡಿಕೊಂಡು
ಹರಕೆಯನ್ನು
ಪೂರೈಸುತ್ತಿದ್ದಾರೆ.
ಭಕ್ತಾದಿಗಳು ಬರುವ ಪ್ರಮಾಣವು ಎರಿಕೆಯಾದ್ದರಿಂದ ದೇವಾಲಯದ ಪ್ರಾಂಗಣ ನಿರ್ಮಿಸಬೇಕೆಂದು ಹಾಲಿ ಆಡಳಿತ ಸಮೀತಿ
ತಿರ್ಮಾನಿಸಿ
ಶ್ರೀಗಳ ಮಾರ್ಗದರ್ಶನದಂತೆ ರೂಪುರೇಷೆ ಹಾಕಲಾಯಿತು.
ಶ್ರೀ ದೇವರ ನೂತನ ಚಂದ್ರಶಾಲೆ ಶಿಲಾನ್ಯಾಸವನ್ನು ಕಾರ್ತಿಕ ಬಹುಳ ಸಂಕಷ್ಟ ಚತುರ್ಥಿ ದಿ.2-12-2012 ರಂದು ಶ್ರೀ ಶ್ರೀ
ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಿಸಲಾಯಿತು.
ಶ್ರೀ ದೇವಸ್ಥಾನದ ಗರ್ಭಗುಡಿ ಸುತ್ತ ಸುಂದರ ಕೆತ್ತನೆಯ ಶಿಲಾಮಯ ಪಂಚಾಂಗ,ಅದರಮೇಲೆ ಮರದಕೆತ್ತನೆಯ ದಳಿ, ತಾಮೃ ಹೊದಿಕೆಯ
ಮಾಡು, ಪ್ರಾಂಗಣವನ್ನು ಶಿಲಾ ಕಂಬದಿಂದ ಮಾಡಲಾಗಿದೆ.
ಶ್ರೀ ದೇವಸ್ಥಾನದ ಗರ್ಭಗುಡಿ ಹಾಗೂ ಘಂಟೆ ಮಂಟಪದಲ್ಲಿ ಕರ್ಣಮುಚ್ಚಿಗೆ ಮಾಡಲಾಗಿದ್ದು ಸೂರ್ಯಮಂಡಲ,ರಾಶಿ,ನಕ್ಷತ್ರ ಮಂಡಲ
ಕೆತ್ತಲಾಗಿದೆ. ಕೆತ್ತನೆಯ ಶಿಲಾಮಯ ಪಂಚಾಂಗಕ್ಕೆ ಆನೆಗಳ ಸಾಲು,ಘಂಟೆಯ ಮಾಲೆಯನ್ನು ಕೆತ್ತಲಾಗಿದೆ. ಮರದಕೆತ್ತನೆಯ
ದಳಿಗೆ
ಗಣಪತಿ ಪಂಚಾಯತ,ಮುದ್ಗಲಪುರಾಣದ ಮೂವತ್ತೆರಡು ಗಣಪತಿಯ ಚಿತ್ರಣ, ಒಂದು ನೂರಾ ಎಂಟು ನಾಟ್ಯಬಂಗಿ, ಯೋಗ ಮುದ್ರೆಗಳನ್ನು
ಕೆತ್ತನೆ ಮಾಡಲಾಗಿದೆ. ಚಂದ್ರಶಾಲೆಯ ಹದಿನೆಂಟು ಕಂಬಗಳಿಗೆ ರಾಜ್ಯದ ಮತ್ತು ಹೊರಾಜ್ಯದ ಹಾಗೂ ವಿದೇಶದ ಪ್ರಸಿದ್ಧ
ದೇವಾಲಯದ
ಗಣಪತಿಯ ಚಿತ್ರಣವನ್ನು ಕೆತ್ತಲಾಗಿದೆ.
ಮುಂದೆ ಓದಿ